ಶಿಕ್ಷಣ ಸಂಸ್ಥೆ ಬಗ್ಗೆ
ದೇವಸ್ಥಾನದ ಹಿಂಭಾಗದ ರಸ್ತೆಯ ಮೇಲೆ ನಿಂತುಕೊಂಡಾಗ ಸುಮಧುರ ಸ್ವರದಲ್ಲಿ ಹಾಡುತ್ತಿದ್ದ ಹಿಂದೂಸ್ತಾನಿ ಶಾಸ್ತ್ರೀಯ ಧ್ವನಿ ಕೇಳುತ್ತಿತ್ತು. ಅದೇ ಹೊತ್ತಿಗೆ ದೇವಸ್ಥಾನದಲ್ಲಿ ದೊಡ್ಡದಾಗಿ “ಗಣಾನಾಂತ್ವಾ ಗಣಪತಿಮ್ ಹವಾಮಹೇ “ಮಂತ್ರಘೋಷ ಕೇಳುತ್ತಿತ್ತು. ಹಾಗೆ ಕೆಳಗಿಳುದು ಬಂದರೆ ಊರಿನ ಶಕ್ತಿ ದೇವತೆ ಬಲಮೂರಿ ಗಣಪತಿ ದೇವಸ್ಥಾನ. ದೇವಸ್ಥಾನಕ್ಕೆ ತಾಗಿಕೊಂಡಂತೆ ಒಂದಕ್ಕೊಂದು ತಾಗಿಕೊಂಡು ಇರುವ ಪ್ರಾಚೀನತೆಗಳನ್ನು ಸಾರುವ ಸಂಕೇತಗಳಂತೆ ಇರುವ ದಪ್ಪ ದಪ್ಪ ಕಂಬಗಳ ಸಾಲುಗಳು. ಜಗುಲಿಯ ಎದುರಿಗೆ ವಿಶಾಲವಾದ ಅಂಗಳ. ಅಂಗಳಕ್ಕೆ ತಾಗಿಕೊಂಡಂತೆ ಇರುವ ಅಡಿಕೆ ತೋಟವನ್ನು ಹೊಂದಿರುವ ಊರು ನಮ್ಮೂರು, ಕೋಟೆಮನೆ.
ಭಾರತದ ದಕ್ಷಿಣ ಭಾಗದಲ್ಲಿರುವ ಪ್ರಸಿದ್ದವಾದ ರಾಜ್ಯಗಳಲ್ಲೊಂದು ಕರ್ನಾಟಕ. ಈ ರಾಜ್ಯದ ಕರಾವಳಿ, ಮಲೆನಾಡು ಬಯಲು ಸೀಮೆಯಂತಹ ಭೂಭಾಗವನ್ನು ಹೊಂದಿರುವ ಜಿಲ್ಲೆ ಉತ್ತರ ಕನ್ನಡ. ಈ ಜಿಲ್ಲೆಯಲ್ಲಿ ಮಲೆನಾಡು ಭಾಗದಲ್ಲಿ ಸದಾ ನಿತ್ಯ ಹರಿದ್ವರ್ಣ ಕಾಡುಗಳಿಂದ ಕಂಗೊಳಿಸುವ, ಹರಿಯುವ ನದಿ ಹಳ್ಳಗಳಿಗೆ ಅಲ್ಲಲ್ಲಿ ಪ್ರಕೃತಿ ಸಹಜವಾದ ಜಲಪಾತಗಳನ್ನು ಹೊಂದಿರುವ ಶಾಂತಿಯುತ ಸಹಬಾಳ್ವೆಗೆ ಮಾದರಿಯಾದ ತಾಲೂಕು ಯಲ್ಲಾಪುರ. ಈ ತಾಲೂಕಿನಿಂದ ಕೇಂದ್ರ ಸ್ಥಳದಿಂದ ೨೫ ಕಿ. ಮೀ. ದೂರದಲ್ಲಿ ನಮೂರು ಕೋಟೆಮನೆ ಇದೆ. ಈ ಊರಿನ ವಿಶೇಷವೇನೆಂದರೆ, ಪೌರೋಹಿತ್ಯದಲ್ಲಿ ಜನರಿಗೆ ಆಸಕ್ತಿ ಹೆಚ್ಚಾಗಿರುವ ಕಾರಣ, ಊರಿನವರೇ ಸೇರಿ ಗುರುಕುಲ ಮಾದರಿಯಲ್ಲಿ “ಶ್ರೀ ಮಾತಾ ವೈದಿಕ ವೇದ ಸಂಸ್ಕ್ರತ ಪಾಠಶಾಲೆ” ಯನ್ನು ಸ್ಥಾಪಿಸಿದರು. ಇಲ್ಲಿ ವೇದ ಮಂತ್ರಗಳನ್ನು ಸಂಸ್ಕತ ಸಾಹಿತ್ಯವನ್ನೂ ಬೋಧಿಸಲಾಗುತ್ತಿತ್ತು. ಇದರಿಂದ ಊರಿನ ಎಲ್ಲ ಮಕ್ಕಳಿಗೂ ಸಂಸ್ಕ್ರತ ಮತ್ತೂ ವೇದ ಅಧ್ಯಯನಕ್ಕೆ ಅನುಕೂಲವಾಯಿತು. ಅಲ್ಲದೆ ಈ ಸಂಸ್ಥೆಯವರು ಉತ್ತಮ ಗ್ರಂಥಾಲಯವನ್ನು ಆ ಕಾಲದಲ್ಲಿಯೇ ಹೊಂದಿದ್ದು ಅಲ್ಲಿನ ಪುಸ್ತಕಗಳನ್ನು ವಿದ್ಯಾರ್ಥಿಗಳಲ್ಲದೇ ಸಾರ್ವಜನಕರಿಗೂ ನೀಡುವ ಸೌಲಭ್ಯವಿತ್ತು. ಈ ಸಂಸ್ಥೆಯ ದೆಸೆಯಿಂದಾಗಿ ಸಂಸ್ಕ್ರತದ ಮತ್ತು ಕನ್ನಡದ ಅನೇಕ ವಿದ್ವಾಂಸರು ಪ್ರವಚನವನ್ನು ನೀಡುವುದಕ್ಕಾಗಿ ಬಂದರು. ವೇದಗೋಷ್ಠಿ ಸಂಸ್ಕೃತಿ ಸಾಹಿತ್ಯ ಗೋಷ್ಠಿ, ಕನ್ನಡ ಸಾಹಿತ್ಯದ ಚಿಂತನ ಮಂಥನ ಕಾರ್ಯಕ್ರಮಗಳು ಇಡೀ ಊರಿಗೆ ಹೊಸತನವನ್ನು ಕೊಟ್ಟಿತು. ಅಲ್ಲದೆ ಆ ಕಾಲದಲ್ಲಿ ಇದ್ದ ಹುಡುಗರು ಈ ವಿಷಯದಲ್ಲಿ ಪಾಂಡಿತ್ಯ ಗಳಿಸಿ ರಾಜ್ಯ- ರಾಷ್ಟ್ರ ಮಟ್ಟದಲ್ಲಿ ತಮ್ಮನ್ನು ಗುರುತಿಸಿಕೊಂಡರು.
ನಮ್ಮೊರಿನವರು ಪ್ರತಿಯೊಂದು ಹಬ್ಬವನ್ನು ಸಡಗರದಿಂದ ಆಚರಿಸುತ್ತಾರೆ. ಪ್ರತಿ ದಿನವೂ ಈ ಹನ್ನೆರಡೂ ಮನೆಯವರು ಮಾಡುವ ಅನ್ನ ಕಾದ್ಯಗಳನ್ನು ದೇವಸ್ಥಾನಕ್ಕೆ ತಂದು ನೈವೇದ್ಯ ಮಾಡಿಸಿಯೇ ಊಟ ಮಾಡುವ ಪದ್ದತಿ ಇದೆ. ಊರ ದೇವತೆ ಗಣಪತಿ ಆಗಿದ್ದರಿಂದ “ಗಣೇಶ ಚತುರ್ಥಿ” ಯನ್ನು ವಿಶೇಷ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ದೇವಸ್ಥಾನದಲ್ಲಿ ಆವತ್ತಿನ ದಿನ ಬೆಳಗಿನಿಂದಲೇ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತದೆ. ಮಹಿಳೆಯರು ಆ ದಿನ ಮಾಡುವ ವಿಶೇಷ ಖಾಧ್ಯಗಳನ್ನು ತಯಾರಿಸುವುದರಲ್ಲಿ ಮಗ್ನರಾಗಿರುತ್ತಾರೆ. ಸಂಜೆಯಾಗುತ್ತಿದ್ದಂತೆ ಅಷ್ಠಾವಧಾನ ಸೇವೆಯೊಂದಿಗೆ ಗಣಪತಿಗೆ ಮಹಾಮಂಗಳಾರತಿ ನೆಡೆಯುತ್ತದೆ. ರಾತ್ರಿ ಉಪಹಾರದ ನಂತರ ಒಮ್ಮೆಲೇ ಯಕ್ಷಗಾನದ ಪದ ಕೇಳಲು ಪ್ರಾರಂಭವಾಗುತ್ತದೆ.
ಹೌದು ಯಕ್ಷಗಾನದಲ್ಲಿ ‘ತಾಳಮದ್ದಳೆ’ ಎಂಬುದು ಒಂದು ಪ್ರಕಾರ, ವೇಷ ಭೂಷಣ ಕಟ್ಟದೆ, ನೃತ್ಯವನ್ನು ಮಾಡದೆ ಕೇವಲ ಮಾತಿನ ಮೂಲಕ ಯಕ್ಷಗಾನದ ಆಖ್ಯಾನದ ಸ್ವರೂಪವನ್ನು ಪ್ರದರ್ಶಿಸುವ ಒಂದು ಬೌದ್ಧಿಕತೆಯಾಗಿದೆ. ಈ ತಾಳಮದ್ದಳೆ ನಮೂರಿನಲ್ಲಿ ಎಷ್ಟು ಪ್ರಸಿದ್ಧಿಯಾಗಿತ್ತೆಂದರೆ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಕಲಾವಿದರು ಭಾಗವಹಿಸುತ್ತಿದ್ದರು. ಊರಿನ, ಪರಊರಿನ ಜನರೆಲ್ಲರೂ ಆ ರಾತ್ರಿ ಬೆಳಗಿನ ತನಕ ಭಾಗಿಯಾಗುತ್ತಿದ್ದರು.
ಬದಲಾದ ಕಾಲಘಟ್ಟದಲ್ಲಿ ಊರಿನ ಹುಡುಗರು ಪಾಠಶಾಲೆಯಿಂದ ವಿಮುಖರಾಗಿದ್ದರೆ. ಔಪಚಾರಿಕ ಶಿಕ್ಷಣದ ಕಡೆಗೆ ವಾಲಿದ್ದಾರೆ. ಉನ್ನತ ಶಿಕ್ಷಣ ಪಡೆಯುವುದಕ್ಕಾಗಿ ನಗರದೆಡೆಗೆ ಸಾಗುತ್ತಿದ್ದರೆ. ಇಂತಹ ಸಂದರ್ಭದಲ್ಲಿ ಕೃಷಿ ಕಾರ್ಯದಲ್ಲಿ ನಗರದೆಡೆಗೆ ಕಾಲೇಜಿನ ಶಿಕ್ಷಣಕ್ಕೆ ಆಕರ್ಷಿತನಾಗದೇ ಮನೆಯ ಕೃಷಿ ಕಾರ್ಯದಲ್ಲಿ ತನ್ನನ್ನು ತೊಡಗಿಸಿ ಕೊಂಡವನು ಯುವಕ ಶ್ರೀಪಾದ. ಇವನು ನಮ್ಮ ಊರಿಗೆ ಹತ್ತಿರವಾದ ಊರಾದ ಬಾಳೆಹದ್ದದ ರೇಖಾ ಭಟ್ ಇವಳನ್ನು ವಿವಾಹವಾದ.
ರೇಖಾ ಭಟ್ಟರು ಸಣ್ಣಿಂದಲೇ ಸುಮಧುರ ಧ್ವನಿಯನ್ನು ಹೊಂದಿದ್ದರು. ತವರು ಮನೆಯಲ್ಲಿ ಯಕ್ಷಗಾನ, ಸಂಗೀತದ ವಾತಾವರಣವಿತ್ತು. ಹಾಗಾಗಿ ಪ್ರೌಢ ಶಾಲೆ ಓದುತ್ತಿರುವಾಗಲೇ ಶಾಸ್ತ್ರೀಯ ಸಂಗೀತ ವನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದರು. ಮುಂದೆ ‘ಬಿ. ಕಾಂ’ ಪಡೆಯುವ ಹೊತ್ತಿಗೆ ಪಂಡಿತ ಗಣಪತಿ ಭಟ್ ಅವರಲ್ಲಿ ಅಭ್ಯಾಸ ಮಾಡಿದರು.
ವಿವಾಹವಾದ ನಂತರ ತಾನು ಕಲಿತ ವಿದ್ಯೆಯನ್ನು ಮಕ್ಕಳಿಗೆ ಕಲಿಸಬೇಕೆಂದು ಹಂಬಲಿಸಿದರು. ಹಾಗಾಗಿ ನಮ್ಮೊರಿನಲ್ಲಿಯೇ “ಮಹಾಗಣಪತಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ” ಶಾಲೆಯನ್ನು ಈ ದಂಪತಿಗಳು ಸ್ಥಾಪಿಸಿದರು. ಇದರಿಂದಾಗಿ ಊರಿನಲ್ಲಿ ಮರೆಯಾಗುತ್ತಿದ್ದ ಸಾಂಸ್ಕ್ರತಿಕ ಪರಿಸರವು ಪುನಃ ಹೊಸ ಆಶಯದೊಂದಿಗೆ ಪ್ರಾರಂಭವಾಯಿತು. ಊರಿನ ಮಕ್ಕಳು ಹಾಗು ಮಹಿಳೆಯರಿಗೂ ಕೂಡ ಶಾಸ್ತ್ರೀಯ ಸಂಗೀತದ ಪರಿಚಯವಾಯಿತಲ್ಲದೆ ಅದರಲ್ಲಿ ಅಭಿರುಚಿಯೂ ಬೆಳೆಯಿತು. ಇವರು ಕಲಿತ ವಿದ್ಯೆಗೆ ವೇದಿಕೆಯನ್ನು ಒದಗಿಸುವುದಕ್ಕಾಗಿ ವಾರ್ಷಿಕ ಸಂಗೀತ ಉತ್ಸವವನ್ನು ಈ ದಂಪತಿಗಳು ಪ್ರಾರಂಭಿಸಿದರು. ಈ ವಾರ್ಷಿಕೋತ್ಸವವನ್ನು ಊರಿನವರೆಲ್ಲರೂ ಸೇರಿ ಅತ್ಯುತ್ಸಾಹದಿಂದ ಮಾಡಲು ಪ್ರಾರಂಭಿಸಿದರು. ಮುಂದೆ ಈ ಶಾಲೆಯನ್ನು ‘ಮಹಾಗಣಪತಿ ಸಂಗೀತ ಪ್ರತಿಷ್ಠಾನ’ ವೆಂದು ನೋಂದಣಿ ಮಾಡಿಸಲಾಯಿತು.
ಅದರಡಿಯಲ್ಲಿ ಹತ್ತು-ಹಲವಾರು ಕಾರ್ಯಕ್ರಮಗಳನ್ನು ಪ್ರತೀ ವರ್ಷವೂ ಸಂಘಟಿಸುತ್ತ ಊರಿನ ಹಾಗೂ ಸುತ್ತ ಮುತ್ತಲಿನವರೆಲ್ಲ ಸಂಗೀತದ ಪರಿಚಯವನ್ನು ಪರಿಣಾಮಕಾರಿಯಾಗಿ ಮಾಡಿಸುತ್ತ ಬರಲಾಯಿತು.
ಇದೀಗ ಸದಾ ಬದಲಾವಣೆಗೆ ಒಳಗಾಗುವ ಸಮಾಜವನ್ನು ಗಮನಿಸುತ್ತಾ, ಆ ಬದಲಾವಣೆಗೆ ಅನುಗುಣವಾಗಿ ಸಂಗೀತದ ಜೊತೆಗೆ ಇವತ್ತಿನ ಬಾಲಕರಿಗೆ ಶಿಕ್ಷಣವನ್ನೂ ಕೊಡಬೇಕೆಂಬ ಮಹದಾಸೆಯನ್ನು ಹೊಂದಿರುವ ಪ್ರಾರಂಭಿಸಲಾಗಿದೆ. ಈ ಶಾಲೆಯೇ ದಿವಂಗತ ಶೀಪದ ಭಟ್ಟ ಸ್ಮಾರಕ ಮನಸ್ವಿನಿ ವಿದ್ಯಾನಿಲಯ.
Accredited by Karnataka State Govt., India
Reg. No: BK IV 34/07-08, R No: 18/2016-17
ಇದೀಗ ಸದಾ ಬದಲಾವಣೆಗೆ ಒಳಗಾಗುವ ಸಮಾಜವನ್ನು ಗಮನಿಸುತ್ತಾ, ಆ ಬದಲಾವಣೆಗೆ ಅನುಗುಣವಾಗಿ ಸಂಗೀತದ ಜೊತೆಗೆ ಇವತ್ತಿನ ಬಾಲಕರಿಗೆ ಶಿಕ್ಷಣವನ್ನೂ ಕೊಡಬೇಕೆಂಬ ಮಹದಾಸೆಯನ್ನು ಹೊಂದಿರುವ ಪ್ರಾರಂಭಿಸಲಾಗಿದೆ. ಈ ಶಾಲೆಯೇ ದಿವಂಗತ ಶೀಪದ ಭಟ್ಟ ಸ್ಮಾರಕ ಮನಸ್ವಿನಿ ವಿದ್ಯಾನಿಲಯ.
ಮನಸ್ವಿನೀ ವಿದ್ಯಾನಿಲಯ
ಉಮ್ಮಚಗಿ, ಹಿರೇಸಾರ, ಹಿಟ್ಳಳ್ಳಿ ಪೋಸ್ಟ್, ಯೆಲ್ಲಾಪುರ ತಾಲೂಕು.
ಶಿರಸಿ ಜಿಲ್ಲೆ – 581347
ಸೋಮವಾರ – ಶನಿವಾರ
ಬೆಳಗ್ಗೆ 10:00 – ಮಧ್ಯಾಹ್ನ 4:00
Copyright @ © 2025 · Manaswinee Vidyanilaya · All Rights Reserved
Copyright @ 2023 · Manaswinee Vidyanilaya
All Rights Reserved
