ನಮ್ಮ ಶಿಕ್ಷಕರು

ಸುಮಾ ದೇವಾಡಿಗ

ಮಕ್ಕಳು ಸಹಜವಾಗಿ ಬೆಳೆಯುವ ಸಸಿಗಳಂತೆ. ಅವರ ಲಾಲನೆ ಪಾಲನೆ ಮಾಡುವ ತೋಟದ ಮಾಲಿಗಳೇ ಶಿಕ್ಷಕರು. ಅವರ ಪ್ರೇಮ, ಅಭಿಮಾನ ವಾತ್ಸಲ್ಯ ಪ್ರೋತ್ಸಾಹಗಳಿಂದ ಮಕ್ಕಳು ಅಭಿವೃದ್ಧಿ ಹೊಂದುತ್ತಾರೆ. ಶಾಲೆಯು ಶಿಕ್ಸಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ವಿನ್ಯಾಸಗೊಳಿಸಲಾವ ಒಂದು ಸಂಸ್ಥೆ . ಶಾಲೆ ಎಂಬ ಪರಿಕಲ್ಪನೆ ಪ್ರಾರಂಭವಾದದ್ದು ಗುರುಕುಲ ಎಂಬ ಶಿಕ್ಷಣ ವ್ಯವಸ್ಥೆಯಿಂದ . ಶಿಕ್ಷಣದ ಮೊದಲ ಗುರಿ ಮಕ್ಕಳಲ್ಲಿ ತಿಳುವಳಿಕೆ ತುಂಬುವುದು . ತಿಳುವಳಿಕೆ ಬೆಳೆಯುವ ಕ್ರಿಯೆ ಮನಯಲ್ಲಿ ಪ್ರಾರಂಭವಾಗಿ ಶಾಲೆಯಲ್ಲಿ ಮುಂದುವರಿಯಬೇಕು .ನಮ್ಮ ಈ ಮನಸ್ವಿನೀ ವಿದ್ಯಾನಿಲಯ ಶಾಲೆಯು ನಮ್ಮ ಪ್ರದೇಶದ ಉತ್ತಮ ಸಂಸ್ಥೆಯಾಗಿದೆ . ನಮ್ಮ ಈ ಶಾಲೆ ಕೆದಳಾದ ಪುಸ್ತಕದ ಪಾಠವಲ್ಲದೆ ಶಿಸ್ತು ಮತ್ತು ನೈತಿಕತೆಯನ್ನು ಪ್ರತಿಯುಂಡು ಮಗುವೂಗೂ ಕಲಿಸುತ್ತಿದೆ . ಮಕ್ಕಳಲ್ಲಿ ಶಾಲೆಯ ಬಗ್ಗೆ ಹೆಚ್ಚಿನ ಆಸಕ್ತಿಯನ್ನುಂಟು ಮಾಡುವ ವಿಶೇಷ ರೀತಿಯ ಪಠ್ಯೇತರ ಚಟುವಟಿಕೆಗಳು ಹಾಗೂ ಶೈಕ್ಷಣಿಕ ಸರ್ವ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾ , ಮಗುವಿನ ಉತ್ತಮ ಭವಿಷ್ಯಕ್ಕೆ ಹಾಗೂ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುತ್ತಿದೆ ನಮ್ಮ ಈ ಮನಸ್ವಿನಿ ಶಾಲೆ .ಪ್ರತಿಯೊಂದು ಮಗುವೂ ಉತ್ತಮ ಪ್ರಗತಿಯತ್ತ ಸಾಗುತ್ತಿದ್ದರೆ . ಉತ್ತಮ ಸಂಸ್ಕಾರವನ್ನು ಅಳವಡಿಸಿಕೊಳ್ಳುತ್ತಿದ್ದರೆ . ಪ್ರತಿಯೊಬ್ಬ ಮಗುವೂ ಕೇವಲ ಪಾಠವಲ್ಲದೆ ಬೇರೆ ಚಟುವಟಿಕೆಗಳಲ್ಲಿ, ಉದಾಹರಣೆಗೆ ಯಕ್ಷಗಾನ ಭರತನಾಟ್ಯ ಸಂಗೀತ ಕ್ರೀಡೆ ಎಲ್ಲದರಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ವಾಣಿ ಯೋಗೀಶ

ಮಗುವಿನ ಮನಸ್ಸು ಮುಗ್ದತೆಯ ಸಾಗರ . ಪ್ರಶ್ನೆಗಳ ಮಹಾಪೂರ , ಕೌತುಕಗಳ ನವ ನವೀನ ಕನಸುಗಳ ಊಹಾಲೋಕ . ಮಗುವಾಗಿದ್ದಾಗ ಕಲಿತ ಭಾಷೆ , ಶಿಸ್ತು , ಶಿಕ್ಷಣ ಸಂಸ್ಕಾರ ಶಾಶ್ವತ ಎನ್ನುವುದು ನನ್ನ ಅನಿಸಿಕೆ.

ಸರಿ ತಪ್ಪುಗಳ ವಿಮರ್ಶೆ ಮಕ್ಕಳ ಮನಸ್ಸಿಗೆ ನಿಲುಕದ್ದು . ಚಿಕ್ಕ ವಯಸ್ಸಿನಲ್ಲಿ ಹಾಕಿ ಕೊಟ್ಟ ಚೌಕಟ್ಟು ಅವರ ಜೀವನಕ್ಕೆ ದಾರಿದೀಪ . ಪಠ್ಯ ಪುಸ್ತಕಗಳ ಶಿಕ್ಷಣವು ಎಲ್ಲೆಡೆ ಲಭ್ಯ . ಆದರೆ ಅದರ ಜೊತೆ ಸಂಪ್ರದಾಯ , ಸಂಸ್ಕಾರ , ವಿವೇಚನೆ , ವ್ಯಕ್ತಿತ್ವ , ಕಲೆ , ನ್ಯಾಯ , ವಿನಯ , ನಡತೆ ಇವೆಲ್ಲವುಗಳ ಒಂದು ಪರಿಕಲ್ಪನೆಯನ್ನ ಹಂತವಾಗಿ ನೀಡಿದ್ದಲ್ಲಿ ಮಗುವಿನ ಸರ್ವತೋಮುಖ ಬೆಳವಣಿಗೆ ಸಾಧ್ಯ . ವಿದ್ಯಾರ್ಥಿಯಲ್ಲಿ ವಿನಯ , ಶಿಸ್ತು ಭಹಳ ಮುಖ್ಯ . ಶಿಸ್ತು ಇದ್ದಲ್ಲಿ ಮಾತ್ರ ಕಲಿಕೆ ಸಾಧ್ಯ . ಜೊತೆಯಲ್ಲಿ ಕರುಣೆ , ಪ್ರೀತಿಯಿಂದ ಮಗುವನ್ನು ಮುನ್ನಡೆಸುವ ಜವಾಬ್ದಾರಿ ಶಿಕ್ಷಕ ವೃಂದದವರದ್ದು ಎನ್ನುವುದು ನನ್ನ ಅಭಿಪ್ರಾಯ.

ಮಹಾಲಕ್ಷ್ಮೀ ಹೆಗಡೆ

ಶಿಕ್ಷಣವೇ ಒಂದು ಅದ್ಭುತವಾದ ಶಕ್ತಿ. ಒಬ್ಬ ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಅಭಿವೃದ್ಧಿ, ಅವನು ಪಡೆಯುವ ಶಿಕ್ಷಣದಿಂದ ಮಾತ್ರ ಸಾಧ್ಯ. “ಇಂದಿನ ಮಕ್ಕಳು ನಾಳಿನ ಪ್ರಜೆಗಳು.” ಆದ್ದರಿಂದ ಇಂದಿನ ಮಕ್ಕಳಿಗೆ ಕೊಡುವ ಸುಸಂಸ್ಕೃತ ಶಿಕ್ಷಣವು ಮುಂದೆ ದೇಶದ ಉತ್ತಮ ನಾಗರೀಕರಗಳು ಒಂದು ಮಾರ್ಗವಾಗಿದೆ.

ಮಕ್ಕಳು ಮಣ್ಣು ಮುದ್ದೆಗಳಿದ್ದಂತೆ. ಅದನ್ನು ಯಾವ ಆಕಾರಕ್ಕೆ ಬೇಕಾದರೂ ಬದಲಾಯಿಸಬಹುದು, ಹಾಗೆಯೇ ಒಬ್ಬ ಶಿಕ್ಷಕನೂ ಕೂಡ ಒಂದು ಮಗುವನ್ನು ಹೇಗೆ ಬೇಕಾದರೂ ಬದಲಾಯಿಸಬಹುದು. ಆದ್ದರಿಂದ ಶಾಲಾ ಕಲಿಕೆಯು ಬರಿಯ ಪಠ್ಯ ಪುಶಕಗಳಷ್ಟೇ ಸೀಮಿತವಾಗಿರದೇ ಉತ್ತಮ ಜೀವನ ಮೌಲ್ಯಗಳು, ನಮ್ಮ ಆಚಾರ-ವಿಚಾರ, ಸಂಸ್ಕೃತಿಗಳಿಗೆ ಪೂರಕವಾಗಿರಬೇಕು. ಆದ್ದರಿಂದ ಮಕ್ಕಳ ಭವಿಷ್ಯವು ಶಾಲಾ ಶಿಕ್ಷಕರ ಕೈಯಲ್ಲಿರುತ್ತದೆ.

ಅನೇಕ ಒತ್ತಡ ಸಮಸ್ಯೆ ಜಂಜಾಟದ ಇಂದಿನ ಯಾಂತ್ರಿಕ ಜೀವನದಲ್ಲಿ ತಂದೆ-ತಾಯಿ ಹಾಗೂ ಮಕ್ಕಳೊಟ್ಟಿಗಿನ ಸಂಬಂಧಗಳಿಗೆ, ಪ್ರೀತಿ ವಿಶ್ವಾಸಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಅದಲ್ಲದೆ ಇಂದಿನ ಮಕ್ಕಳೂ ಕೂಡ ಮೊಬೈಲು, ಟಿ.ವಿ ಇದರಿಂದ ಮಕ್ಕಳ ಮನಸ್ಸಿನ ಮೇಲೆ, ಜೀವನದ ಮೇಲೆ ಅತಿ ದೊಡ್ಡ ಪರಿಣಾಮ ಬೀರುತ್ತಿದೆ. ಆದ್ದರಿಂದ ಇವೆಲ್ಲದರ ಬಗ್ಗೆ ಅರಿವು ಮಾಡಿಸುವುದು ಮಕ್ಕಳನ್ನು ಯಶಸ್ಸಿನ ದಾರಿಯಲ್ಲಿ ಕೊಂಡೊಯ್ಯುವುದು ಪಾಲಕರ ಕರ್ತವ್ಯವಲ್ಲದೇ, ಒಬ್ಬ ಉತ್ತಮ ಶಿಕ್ಷಕನ ಜವಾಬ್ದಾರೀಯೂ ಆಗಿದೆ.

ರೇಖಾ ಭಟ್

ಮಕ್ಕಳು ಸಹಜವಾಗಿ ಬೆಳೆಯುವ ಸಸಿಗಳಂತೆ. ಅವರ ಲಾಲನೆ ಪಾಲನೆ ಮಾಡುವ ತೋಟದ ಮಾಲಿಗಳೇ ಶಿಕ್ಷಕರು. ಅವರ ಪ್ರೇಮ, ಅಭಿಮಾನ ವಾತ್ಸಲ್ಯ ಪ್ರೋತ್ಸಾಹಗಳಿಂದ ಮಕ್ಕಳು ಅಭಿವೃದ್ಧಿ ಹೊಂದುತ್ತಾರೆ. ಶಾಲೆಯು ಶಿಕ್ಸಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ವಿನ್ಯಾಸಗೊಳಿಸಲಾವ ಒಂದು ಸಂಸ್ಥೆ . ಶಾಲೆ ಎಂಬ ಪರಿಕಲ್ಪನೆ ಪ್ರಾರಂಭವಾದದ್ದು ಗುರುಕುಲ ಎಂಬ ಶಿಕ್ಷಣ ವ್ಯವಸ್ಥೆಯಿಂದ . ಶಿಕ್ಷಣದ ಮೊದಲ ಗುರಿ ಮಕ್ಕಳಲ್ಲಿ ತಿಳುವಳಿಕೆ ತುಂಬುವುದು . ತಿಳುವಳಿಕೆ ಬೆಳೆಯುವ ಕ್ರಿಯೆ ಮನಯಲ್ಲಿ ಪ್ರಾರಂಭವಾಗಿ ಶಾಲೆಯಲ್ಲಿ ಮುಂದುವರಿಯಬೇಕು.

ನಮ್ಮ ಈ ಮನಸ್ವಿನೀ ವಿದ್ಯಾನಿಲಯ ಶಾಲೆಯು ನಮ್ಮ ಪ್ರದೇಶದ ಉತ್ತಮ ಸಂಸ್ಥೆಯಾಗಿದೆ . ನಮ್ಮ ಈ ಶಾಲೆ ಕೆದಳಾದ ಪುಸ್ತಕದ ಪಾಠವಲ್ಲದೆ ಶಿಸ್ತು ಮತ್ತು ನೈತಿಕತೆಯನ್ನು ಪ್ರತಿಯುಂಡು ಮಗುವೂಗೂ ಕಲಿಸುತ್ತಿದೆ . ಮಕ್ಕಳಲ್ಲಿ ಶಾಲೆಯ ಬಗ್ಗೆ ಹೆಚ್ಚಿನ ಆಸಕ್ತಿಯನ್ನುಂಟು ಮಾಡುವ ವಿಶೇಷ ರೀತಿಯ ಪಠ್ಯೇತರ ಚಟುವಟಿಕೆಗಳು ಹಾಗೂ ಶೈಕ್ಷಣಿಕ ಸರ್ವ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾ , ಮಗುವಿನ ಉತ್ತಮ ಭವಿಷ್ಯಕ್ಕೆ ಹಾಗೂ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುತ್ತಿದೆ ನಮ್ಮ ಈ ಮನಸ್ವಿನಿ ಶಾಲೆ.

ಪ್ರತಿಯೊಂದು ಮಗುವೂ ಉತ್ತಮ ಪ್ರಗತಿಯತ್ತ ಸಾಗುತ್ತಿದ್ದರೆ . ಉತ್ತಮ ಸಂಸ್ಕಾರವನ್ನು ಅಳವಡಿಸಿಕೊಳ್ಳುತ್ತಿದ್ದರೆ . ಪ್ರತಿಯೊಬ್ಬ ಮಗುವೂ ಕೇವಲ ಪಾಠವಲ್ಲದೆ ಬೇರೆ ಚಟುವಟಿಕೆಗಳಲ್ಲಿ, ಉದಾಹರಣೆಗೆ ಯಕ್ಷಗಾನ ಭರತನಾಟ್ಯ ಸಂಗೀತ ಕ್ರೀಡೆ ಎಲ್ಲದರಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

Accredited by Karnataka State Govt., India
Reg. No: BK IV 34/07-08, R No: 18/2016-17

ಇದೀಗ ಸದಾ ಬದಲಾವಣೆಗೆ ಒಳಗಾಗುವ ಸಮಾಜವನ್ನು ಗಮನಿಸುತ್ತಾ, ಆ ಬದಲಾವಣೆಗೆ ಅನುಗುಣವಾಗಿ ಸಂಗೀತದ ಜೊತೆಗೆ ಇವತ್ತಿನ ಬಾಲಕರಿಗೆ ಶಿಕ್ಷಣವನ್ನೂ ಕೊಡಬೇಕೆಂಬ ಮಹದಾಸೆಯನ್ನು ಹೊಂದಿರುವ ಪ್ರಾರಂಭಿಸಲಾಗಿದೆ. ಈ ಶಾಲೆಯೇ ದಿವಂಗತ ಶೀಪದ ಭಟ್ಟ ಸ್ಮಾರಕ ಮನಸ್ವಿನಿ ವಿದ್ಯಾನಿಲಯ.

ಮನಸ್ವಿನೀ ವಿದ್ಯಾನಿಲಯ

ಉಮ್ಮಚಗಿ, ಹಿರೇಸಾರ, ಹಿಟ್ಳಳ್ಳಿ ಪೋಸ್ಟ್, ಯೆಲ್ಲಾಪುರ ತಾಲೂಕು.
ಶಿರಸಿ ಜಿಲ್ಲೆ – 581347 

ಸೋಮವಾರ – ಶನಿವಾರ
ಬೆಳಗ್ಗೆ 10:00 – ಮಧ್ಯಾಹ್ನ 4:00

Copyright @ © 2025 · Manaswinee Vidyanilaya · All Rights Reserved

Copyright @ 2023 · Manaswinee Vidyanilaya
All Rights Reserved